ತಾ ಎಂದೆನಲ್ಲದೇ | ತಾಯಿನಾನೆಂಬೆನೇ |
ತಾಯಿಯೆಂದಾನು ನುಡಿದೇನು ಪರಸ್ತ್ರೀಯ|
ತಾಯಿಯೆಂದೆಂಬ ಸರ್ವಜ್ಞ||
- ಮಲ್ಲಮ್ಮನನ್ನು "ತಾ" ಎಂದು ಬೇಡುವೆನು ಹೊರತು ಅವಳನ್ನು "ನನ್ನ ತಾಯಿ" ಅಂತ ಕರಿಯೋದಿಲ್ಲ. ಜಗತ್ತಿನಲ್ಲಿಯ ಪರಸ್ತ್ರೀಯರೂ ನನಗೆ ತಾಯೆಂದಿರಾಗಬೇಕು.
ನೂಕಿ ಬಿಟ್ಟರು ಆಗ | ಕಾಕುತನದೊಳು ಬೇಗ|
ಲೋಕದೊಳಗೆಲ್ಲ ಕಂಡದ್ದು ನುಡಿದು ತಾ|
ನೇಕವಾಗಿಹನು ಸರ್ವಜ್ಞ||
- ಮೇಲೆ ಹೇಳಿದಂತ ನಿಜವಾದ ಸಂಗತಿಯನ್ನು ಹೇಳಿದ ಕಾರಣಕ್ಕೆ ನನ್ನನು ಮನೆಯಿಂದ ಹೊರಗೆ ಹಾಕಿದರು. ಆದರೂ ಲೋಕದಲ್ಲಿ ಕಂಡ ಸಂಗತಿಗಳನ್ನು ಹೇಳುತ್ತಾ ಇದ್ದೀನಿ.
ಮೀರಿ ಬೆಳೆಯಲು ತನುವು| ಆರು ಬಣ್ಣವ ನುಡಿಸಿ|
ಮೂರು ರುಚಿದೋರಿ ಮೆರೆಸಿ ತಾ ತನ್ನನ್ನೇ|
ತೋರದೇ ಹೋದ ಸರ್ವಜ್ಞ||
- ಹುಟ್ಟುವುದು, ಇರುವುದು, ಬೆಳೆಯುವುದು, ಬದಲಾಯಿಸುವುದು, ಬಡವನಾಗುವುದು, ಹಾಳಾಗುವುದು ಎಂಬ ಆರು ಬಗೆಯ ವಿಕಾರಗಳನ್ನು ಹೊಂದಿ, ಸತ್ವ, ರಜ ಹಾಗು ತಮ ಗುಣಗಳಿಗೆ ಒಳಗಾದ ನನ್ನ ದೇಹವು ಬೆಳವಣಿಗೆಯನ್ನು ಹೊಂದಿತು.
ಕಣ್ಣು ನಾಲಿಗೆ ಮನವ | ಪನ್ನಗಧರ ಕೊಟ್ಟ|
ಚೆನ್ನಾಗಿ ಮನವ ತೆರೆದು ತಾ ಬಿಡದೆ|
ಚನ್ನನಾ ನೆನಹು ಸರ್ವಜ್ಞ||
- ನನಗೆ ಪಂಚೇಂದ್ರಿಯಗಳನ್ನು, ಮನಸನ್ನು ಶಿವ ಕೊಟ್ಟಿದ್ದಾನೆ. ಅಂತಹ ಶಿವನನ್ನು ಮನಸ್ಸನ್ನು ಬೇರೇ ವಿಷಯಗಳ ಕಡೆಗೆ ಹರಿಯಗೊಡದೆ ಸದಾ ನೆನೆಯುತ್ತೇನೆ.
( ಈತ, ದೇವತೆಗಳಲ್ಲಿ ಶಿವನೇ ಶ್ರೇಷ್ಠನೆಂದು ಸಾರುವ ವಚನಗಳನ್ನೇ ಬರೆದಿದ್ದಾನೆ.)
Monday, 6 April 2009
Subscribe to:
Post Comments (Atom)
9 comments:
ಜಯಪ್ರಕಾಶ,
ಸರ್ವಜ್ಞನ ವಚನಗಳ ಬಗೆಗೆ ಒಂದು blog ಪ್ರಾರಂಭಿಸಿರುವದು
ಬಹಳ ಉತ್ತಮವಾದ ಕೆಲಸ. ನಿಮ್ಮ ಮೂಲಕ ಸರ್ವಜ್ಞನ ಅನೇಕ ವಚನಗಳನ್ನು ನೋಡುವ ಅವಕಾಶ ನಮಗೆ ಸಿಗಲಿ.
ಜಯಶಂಕರ್,
ಈ ರೀತಿ ಸರ್ವಜ್ಞನ ವಚನಗಳನ್ನು ಅರ್ಥಪೂರ್ಣ ತಾತ್ಪರ್ಯದ ಜೊತೆಯಲ್ಲಿ ಕೊಡುವ ಮೂಲಕ ನೀವು ತುಂಬಾ ಉತ್ತಮ ಕೆಲಸ ಮಾಡುತ್ತಿದ್ದೀರಿ...
ನಿಮ್ಮ ಈ ಸೇವೆಯ ಬಗ್ಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ....ಮತ್ತು ಇದನ್ನು ಪ್ರತಿನಿತ್ಯ ನೋಡುತ್ತೇನೆ...ಧನ್ಯವಾದಗಳು.
ಉತ್ತಮ ಪ್ರಯತ್ನ, ಮು೦ದುವರಿಸಿ
"ತಾ ಎಂದೆನಲ್ಲದೇ | ತಾಯಿನಾನೆಂಬೆನೇ |
ತಾಯಿಯೆಂದಾನು ನುಡಿದೇನು ಪರಸ್ತ್ರೀಯ|
ತಾಯಿಯೆಂದೆಂಬ ಸರ್ವಜ್ಞ||"
ee vachanada aarthavannu innu vistharisi. Probably i am not getting the right point as to what it is trying to convey
ಸುನಾಥಂಕಲ್, ಶಿವಣ್ಣ, ಪರಾಂಜಪೆ ಅವರೆ,
ಧನ್ಯವಾದಗಳು.
ಪದ್ಯ-ಗದ್ಯ:
ನನಗೆ ಅರ್ಥವಾಗಿರೋದು ಹೇಳುತ್ತೇನೆ. ನಿಮಗೆ ಇದು ಸರಿ ಅನಿಸ ಬಹುದು.
ಸರ್ವಜ್ಞನು ಎಲ್ಲಾ ಸ್ತ್ರೀಯರನ್ನು ತಾಯಿಯಂತೆ ಕಾಣುತ್ತಾನೆ ಹಾಗು ಅವನ ದೃಷ್ಟಿಯಲ್ಲಿ ಹೆತ್ತ ತಾಯಿ ಮಲ್ಲಮ್ಮ ಅಲ್ಲ...ಪಾರ್ವತಿ ಹಾಗು ಅವನ ತಂದೆ ಈಶ್ವರ. (ಈಶ್ವರನ ವರ ಪ್ರಸಾದದಿಂದ ಸರ್ವಜ್ಞ ಹುಟ್ಟಿರುತ್ತಾನೆ.)
ಒಳ್ಳೆಯ ಪ್ರಯತ್ನ..ಶುಭವಾಗಲಿ ಜಯಶಂಕರ್.
-ಧರಿತ್ರಿ
ಜಯಶಂಕರ್...
ಬಹಳ ಒಳ್ಳೆಯ ಕೆಲಸ ಮಾಡ್ತಾ ಇದ್ದೀರಿ..
ಈ ತ್ರಿಪದಿಗಳು ಬದುಕಿನ, ಆಧ್ಯಾತ್ಮದ
ಸಾರಗಳನ್ನು ತಿಳಿಸುವ ದಾರಿದೀಪಗಳು...
ಅಭಿನಂದನೆಗಳು...
ಧರಿತ್ರಿ ಹಾಗು ಪ್ರಕಾಶಣ್ಣ,
ನಿಮ್ಮ ಪ್ರೋತ್ಸಾಹಕ್ಕೆ ವಂದನೆಗಳು.
ee website nijakku nanage haagu elle kannada priyarige santhasavannu thandide. ee disheyalladaru namma kannada bhashe meru parvathavannu muttali, ellera mana manegalallu sarvagnana vachanagalu manemaadali. sarvarigu shubhavagali.-Kumar (kannadiga)
Post a Comment