Saturday 4 April 2009

ವಚನಗಳನ್ನು ಆರಂಭಿಸುವ ಮುನ್ನ

ಈ ಸರ್ವಜ್ಞನ ವಚನಗಳನ್ನು ಓದುತ್ತಿರುವವನು ನಾನು. ಇದರಿಂದ ನಾವು ತಿಳಿದುಕೊಳ್ಳ ಬೇಕಾದ ವಿಷಯಗಳು ಬೇಕಾದಷ್ಟಿವೆ. ಸರ್ವಜ್ಞನ ಕೆಲವು ವಚನಗಳನ್ನು ಶಾಲೆಯಲ್ಲಿ ಓದಿದಾಗ ನನಗೆ ತುಂಬಾ ಹಿಡಿಸಿತ್ತು. ಮೂರು ಸಾಲುಗಳಲ್ಲಿ ಏನೇನೋ ಹೇಳೋ ಶಕ್ತಿ ಆತನಲ್ಲಿತ್ತು.

ಇದನ್ನು ಓದಿ, ಇದರ ಪ್ರೇರಣೆಯಿಂದ ನಾನಗಾದ ಕೆಲವು ಅನುಭವಗಳನ್ನು ವಚನಗಳ ಮಾದರಿಯಲ್ಲಿ ಬರೆಯುತ್ತಿದ್ದೀನೆ.

ಈ ವಚನಗಳನ್ನು ಓದುತ್ತಿದ್ದಾಗ ನನಗೆ ತಿಳಿದ ಮತ್ತೊಂದು ವಿಷಯ, ನಮ್ಮ ಚಲನ ಚಿತ್ರ ಸಾಹಿತಿಳಿಗೂ ವಚನ ಸಹಾಯ ಮಾಡಿದೆಯೆಂದು.

ನಮ್ಮ ಚಿ. ಉದಯಶಂಕರರು ಬರೆದಿರೋ ಹಾಡು:

ಬಂದೆಯ ಬಾಳಿನ ಬೆಳಕಾಗಿ
ಬಂದೆಯ ಪ್ರೇಮದ ಸಿರಿಯಾಗಿ

ಅದರ ಚರಣದಲ್ಲೊಂದು ಕಡೆ..

"ಜಾಣೆ ನುಡಿಗಳೋ..
ವೀಣೆ ಸ್ವರಗಳೋ
ಕಾಣೆನು ಪ್ರೇಯಸಿ ನಾನು...." ಅಂತ ಬರೆದಿದ್ದಾರೆ.

ಈ ವಚನ ಗಮನಿಸಿ:
ಜಾಣೆಯಾ ನುಡಿ ಲೇಸು| ವೀಣೆಯಾ ಸ್ವರ ಲೇಸು
ಮಾಣದಲೆ ವದನ ಶುಚಿ ಲೇಸು| ಕೂರ್ಪವರ
ಕಾಣುವುದೇ ಲೇಸು ಸರ್ವಜ್ಞ

ಅಷ್ಟೇ ಅಲ್ಲ.. ಚಿ.ಉ ಸಂಸ್ಕೃತದ ಶುಭಾಷಿತವನ್ನು ...

"ಮೈಯನೆ ಹಿಂಡಿ ನೊಂದರು ಕಬ್ಬು ಸಿಹಿಯ ಕೊಡುವುದು
ತೇಯುತಲಿದ್ದತೂ ಗಂಧದ ಪರಿಮಳ ತುಂಬಿ ಬರುವುದು..
ತಾನೆ ಉರಿದರು ದೀಪವು ಮನೆಗೆ ಬೆಳಕ ಕೊಡುವುದು" ಅಂತ ಬರೆದಿಲ್ಲವೇ?

ಎತ್ತಣ ಮಾಮರ ಎತ್ತಣ ಕೋಗಿಲೆ ಎಂಬ ಅಲ್ಲಮಪ್ರಭು ವಚನವನ್ನು - "ಮಾಮರವೆಲ್ಲೋ ಕೋಗಿಲೆ ಎಲ್ಲೋ" ಅಂತ ಬರೆದಿಲ್ಲವೇ?

ಇದು ಕೇವಲ ಒಬ್ಬ ಸಾಹಿತಿಯ ೩ ಉದಾಹರಣೆ. ಇನ್ನೆಷ್ಟು ಜನರಿಗೆ ಇದರ ಸಹಾಯವಾಗಿದೆಯೋ ಗೊತ್ತಿಲ್ಲ.


ಈ ಬ್ಲಾಗು ಶುರು ಮಾಡಲು ನನಗೆ ಸಲಹೆ ಕೊಟ್ಟ ನನ್ನ ಭಾವ ಶ್ರೀ ಗಿರೀಶ್ ಚಂದ್ರ ಅವರಿಗೆ ವಂದಿಸುತ್ತೇನೆ.

1 comment:

sunaath said...

ನಮ್ಮ ಹಳೆಯ ಕವಿಗಳು ಹೊಸ ಕವಿಗಳಿಗೆ ನೀಡಿದ ಪ್ರೇರಣೆಯ ಉದಾಹರಣೆಗಳನ್ನು ನೋಡಿ ಖುಶಿಯಾಯಿತು.
ಹಳೆಯ ಸಾಹಿತ್ಯದ ಅಧ್ಯಯನದಿಂದ ಖಂಡಿತವಾಗಿಯೂ ಲಾಭವಾಗುತ್ತದೆ.