Sunday 5 April 2009

ಸರ್ವಜ್ಞ ಯಾರು?

ಮುನ್ನ ಕೈಲಾಸದಲಿ | ಪನ್ನಗಧರನಾಳು
ಎನ್ನಯಾ ಪೆಸರು, ಪುಷ್ಪದತ್ತನು ಎಂದು|
ಮನ್ನಿಪರು ದಯದಿ ಸರ್ವಜ್ಞ||

ಅಂದಿನ ಪುಷದತ್ತ| ಬಂದ ವರರುಚಿಯಾಗಿ|
ಮುದವ ಸಾರೆ, ಸರ್ವಜ್ಞನೆಂದೆನಿಸಿ|
ನಿಂದವನು ನಾನೆ ಸರ್ವಜ್ಞ||

ತಂದೆ ಬಸವರಸನು| ತಾಯಿ ಮಾಳಿಯು ಅಲ್ಲ|
ಚಂದ್ರಶೇಖರನ ವರದಿಂದ ಹುಟ್ಟಿದ|
ಕಂದ ತಾನೆಂದ ಸರ್ವಜ್ಞ||
- ಬಸವರಸನು ಸರ್ವಜ್ಞನ ತಂದೆ ಹಾಗು ಮಲ್ಲಮ್ಮ ಆತನ ತಾಯಿ. ತತ್ವಶಹ ವಿಚಾರ ಮಾಡಿದರೆ ಬಸವರಸನೇ ಈಶ್ವರ, ಮಲ್ಲಮ್ಮನೇ ಪಾರ್ವತಿಯ. ಅವರಿಬ್ಬರು ಈಶ್ವರನ ಪ್ರಸಾದದಿಂದ ನನ್ನನ್ನು ಪಡೆದವರಾದ್ದರಿಂದ ನಾನು ನಿಶ್ಚಯವಾಗಿ ಈಶ್ವರನ ಕಂದ.

9 comments:

Lakshmi Shashidhar Chaitanya said...

prayatna shlaaghaneeya. nimma jote naavu kai jodisutteve. shubhavaagali.

ಅಂತರ್ವಾಣಿ said...

protsaahakke dhanyavaadagaLu

shivu.k said...

ಜಯಶಂಕರ್,

ವಚನಗಳನ್ನು ನಮಗೆ ಈ ರೀತಿ ಕೊಡುತ್ತಾ...ನಾವು ಕಲಿಯುವಂತೆ ಮಾಡುತ್ತಿದ್ದೀರಿ..ಧನ್ಯವಾದಗಳು.

sunaath said...

ಸರ್ವಜ್ಞನು "ತಂದೆ ಬಸವರಸನು, ತಾಯಿ ಮಾಳಿಯು ಅಲ್ಲ"
ಎಂದು negative ಆಗಿ ಹೇಳಿರುವದು ಆಶ್ಚರ್ಯಕರವಾಗಿದೆ.
ಇದರ ಬಗೆಗೆ ಅಧ್ಯಯನವಾಗಬೇಕಲ್ಲವೆ?

ಅಂತರ್ವಾಣಿ said...

ಶಿವಣ್ಣ,
ವಂದನೆಗಳು...ಬರುತ್ತಿರಿ.

ಸುನಾಥಂಕಲ್,
ಈಶ್ವರನ ವರದಿಂದ ಸರ್ವಜ್ಞ ಹುಟ್ಟಿದ್ದಾನೆ. ಅವನ ಹಿಂದಿನ ಜನ್ಮದಲ್ಲಿ ಕೈಲಾಸದಲ್ಲಿ ಪುಷ್ಪದತ್ತ ಆಗಿ ನೆಲೆಸಿರುತ್ತಾನೆ.
ಸರ್ವಜ್ಞನ ಹೆತ್ತ ತಾಯಿ ತಂದೆ ಅವರಾದರೂ ಆತನ ದೃಷ್ಟಿಯಲ್ಲಿ ಈಶ್ವರನೇ ಅವನಿಗೆ ತಂದೆ ಹಾಗು ಪಾರ್ವತಿಯೇ ತಾಯಿ.
ಹಾಗಾಗಿ ಈ ವಚನದಲ್ಲಿ Genetically ತಂದೆ ತಾಯಿ ಇವರಾದರೂ ಶಿವ ಹಾಗು ಪಾರ್ವತಿಯೇ ಅವನ ತಂದೆ ತಾಯಿ ಎಂದು ಹೇಳಿದ್ದಾನೆ.

ನಿಮ್ಮ ಸಂದೇಹ ಬಗೆ ಹರಿದಿದೆ ಎಂದು ತಿಳಿದಿದ್ದೇನೆ.

ಮಹೇಶ್ ಎಸ್ ಪಲ್ಲಕ್ಕಿ said...

ನಮಸ್ಕಾರ....
ನಿಮ್ಮ ಪ್ರಯತ್ನಕ್ಕೆ ನನ್ನ ಹೃದಯಪೂರ್ವಕ ಅಭಿನ೦ದನೆಗಳು...
ನಾನು ಸಹ ಸರ್ವಜ್ಞನ ವಚನಗಳ ಅಭಿಮಾನಿ...ಆದರೂ ನನಗೆ ಸರ್ವಜ್ಞನ ಬಗ್ಗೆ ಕೆಲವೊ೦ದು ವಿಚಾರಗಳು ಬೇಕಾಗಿವೆ..
ಸರ್ವಜ್ಞನ ವಚನಗಳಲ್ಲಿ ಕೆಲವೊ೦ದು ಅ೦ಶಗಳು ನನಗೆ ಅಸಮಾಧಾನ ಉ೦ಟು ಮಾಡಿವೆ.
ಕೆಲವೊ೦ದು ವಚನಗಳಲ್ಲಿ ಅರ್ಥವೇ ಇಲ್ಲವೇನೋ ಅನ್ನಿಸಿಬಿಡುತ್ತದೆ...ಜಾತಿಯ ಬಗ್ಗೆ ಅವರು ಹೇಳುವುದೇನೊ ನಿಜ,,ಆದರೆ ಜಾತಿಯನ್ನೇ ಹೀಯಾಳಿಸಿರುವುದು ಏಕೊ ನನ್ನ ಗೊ೦ದಲತೆಗೆ ಕಾರಣವಾಗುತ್ತಿದೆ...
ಉದಾಹರಣೆಗೆ:
ಹಾದರದ ಕಥೆಯದ್ನ / ಸೋದರರ ವಧೆಯನ್ನ / ಆದರಿಸಿ
ಪುಣ್ಯಕಥೆಯೆ೦ದು ಕೇಳುವರು / ಮಾದಿಗರು ನೋಡಾ ಸರ್ವಜ್ಞ.
[ ಹಾದರದಿ೦ದ ತು೦ಬಿದ ಕಥೆ (ಕ್ರಿಷ್ಣಾವತಾರ) ಸೋದರರ ಸೋದರರಲ್ಲಿ ಕಾಳವಾಗಿ ಸೋದರರು ಹತರಾದ ಕಥೆ (ಮಹಾಭಾರತ) ಗಳನ್ನು ಪೂಜಿಸಿ ಅವು ಪುಣ್ಯ ಕಥೆಗಳೆ೦ದು ತಿಳಿದು ಹೇಳುವ ಜನರು ನೀಚರು ಎ೦ಬುದು ಸರ್ವಜ್ಞನ ಅಭಿಪ್ರಾಯ]
ಹಾಗಾದರೆ ಪುರಾಣದ ಕಥೆಗಳೆಗೆ ಬೆಲೆಯಿಲ್ಲವೆ..??.....
ಹಾಗೇ ಬೇಡನ ಬಗ್ಗೆ ಅವರು ಹೇಳೆರುವುದು ಹೀಗೆ ಇದೆ...
ಆಡಿ ಮರುಗಲು ಹೊಲ್ಲ / ಕೂಡಿ ಕಾಡಲು ಹೊಲ್ಲ /
ಬೇಡನಾ ನ೦ಟು ತರವಲ್ಲ ಅವನ ಕುರಿ / ತಾಡುವುದೇ ಹೊಲ್ಲ ಸರ್ವಜ್ಞ //
[ ಬೇಡನಿಗೆ ಆಡಿಕೊ೦ಡು ಮರುಗುವುದು ಬೇಡ. ಅವನ ಸ೦ಗಡ ಆಡುವದೂ ಬೇಡ.ಬೇಡನ ಗೆಳೆತನ ಒಳ್ಳೆಯದಲ್ಲ.ಅವನ ವಿಷಯ ಮಾತಾಡುವುದೇ ಬೇಡ]
ಜಾತೀಯತೆಯನ್ನು ವಿರೋಧಿಸುವುದು ಓಕೆ....ಆದರೆ ಬ್ರಾಹ್ಮಣರು ಹೊಲೆಯರನ್ನು ಕಾಣುವ ಹಾಗೆ ಜಾತಿಯ ಜನರನ್ನು ಹೀಯಾಳಿಸಿದ್ದಾದರೂ ಏಕೆ.ಇಷ್ಟೇ ಅಲ್ಲ..ಇನ್ನು ಅನೇಕ ಅವರ ವಚನಗಳು ಹೀಗಿವೆ.
ನನ್ನ ಈ ಗೊ೦ದಲದ ಬಗ್ಗೆ ನಿಮ್ಮ ಅಭಿಪ್ರಾಯವೇನು..???...ದಯವಿಟ್ಟು ತಿಳಿಸುವಿರಾ...????....

ನಿಮ್ಮ ವಿಶ್ವಾಸಿ,
ಮಹೇಶ್...

ಅಂತರ್ವಾಣಿ said...

ಮಹೇಶ್ ನಮಸ್ಕಾರ,
ನಿಮ್ಮ ಸ್ಪಂದನೆಗೆ ವಂದನೆಗಳು...

ನೀವು ಕೇಳಿರುವ ವಿಚಾರಗಳ ಬಗ್ಗೆ ನನ್ನ ಅಭಿಪ್ರಾಯ ಹೇಳುತ್ತೇನೆ.
ಸರ್ವಜ್ಞನ ವಚನಗಳಲ್ಲಿ ಕೆಲವು ನಿಮಗೆ ಅರ್ಥವಾಗಿಲ್ಲ ಅನ್ನುತ್ತಿದ್ದೀರ.. ಅರ್ಥವಿಲ್ಲದೆ ಆತ ಬರೆದಿರುವುದು ಸಾಧ್ಯವಿಲ್ಲ. ಅದರೊಳಗೆ ಬೇರೆ ಗೂಡಾರ್ಥವಿರುತ್ತದೆ.

ಆತ ಜಾತಿಯ ವಿರೋಧಿ ಅಂತ ಕೆಲವು ವಚನಗಳಲ್ಲಿ ಕಂಡು ಬರುತ್ತವೆ. "ಉದ್ಯೋಗದಿಂದ ಜಾತಿ ಗುರುತಿಸಿದ್ದಾನೆ" ಅಂತ ನನ್ನ ಅಭಿಪ್ರಾಯ.

ಮಹಾಭಾರತದ ಬಗ್ಗೆ ಹೀಗೆ ಬರೆದಿರಲು ಕಾರಣ ನನಗೆ ತಿಳಿದಿಲ್ಲ. ಆದರೆ ಈಗಷ್ಟೆ ಅಂತರ್ಜಾಲದಲ್ಲಿ ಜಾಲಾಡಿ "ಮಾದಿಗ" ಬಗ್ಗೆ ತಿಳಿದೆ.
http://en.wikipedia.org/wiki/Madiga
ಮಾದಿಗ ಪದವು ಸಂಸ್ಕೃತದಿಂದ ಬಂದಿದೆ (ಮಹಾ + ಆದಿಗ) ಹಾಗು ಅದರ ಅರ್ಥ "Great and Oldest". ಇದರ ಪ್ರಕಾರ (ಓಳಾರ್ಥದಲ್ಲಿ.. ಮಹಾಭಾರತ ಓದುವವರು ಮಹಾನ್ ಪುರುಷರು) So Positive ಆಗಿ ಯೋಚನೆ ಮಾಡಿದ್ದಾನೆ ಅನಿಸುತ್ತೆ.

ಬೇಡನ ಬಗ್ಗೆ: ತನ್ನ ಆಹಾರಕ್ಕೆ ಬೇಟೆಯಾಡುವವನು ಬೇಡ. ನೀವು ಅವನ ಗೆಳೆತನ ಬೆಳಿಸಿ, ಪ್ರಾಣಿಗಳು ಸಿಗದ ಸಮಯದಲ್ಲಿ ಆತ ನಿಮ್ಮನ್ನೇ ಕೊಂದು ತಿನ್ನ ಬಹುದು ಆದ್ದರಿಂದ ನಮ್ಮ ಜಾಗೃತಿಯಲ್ಲಿ ನಾವು ಇದ್ದರೆ ಓಳ್ಳೇದು ಅನ್ನುವ ಭಾವನೆಯಲ್ಲಿ ಬರೆದಿರಬಹುದು.


ಇವೆಲ್ಲಾ ನನ್ನ ಅನಿಸಿಕೆ. ಸರಿಯಿರ ಬಹುದು.. ತಪ್ಪೂ ಇರಬಹುದು.

ಮಹೇಶ್ ಎಸ್ ಪಲ್ಲಕ್ಕಿ said...

ಗೆಳೆಯ ಜಯಶ೦ಕರ್....
ನಿಮ್ಮ ಮಾತಿನಲ್ಲೂ ಅರ್ಥವಿದೆ..ಒಪ್ಪಿಕೊಳ್ಳುತ್ತೇನೆ.
ಮೇಧಾವಿಗಳು ಹೇಳುವ ವಿಚಾರಗಳಲ್ಲಿ ಎಷ್ಟೋ ಗೂಢಾರ್ಥಗಳಿರುತ್ತವೆ,ನಮ್ಮ೦ಥವರಿಗೆ ಅರಿವಾಗುವುದು ಸ್ವಲ್ಪ ಕಷ್ಟವೆ.
ಬರಿ ಬೇಡನ ಬಗ್ಗೆ ಬರೆದಿದ್ದೇ ಆಗಿದ್ದಲ್ಲಿ ನಾನು ಇಷ್ಟೋ೦ದು ಗೊ೦ದಲಕ್ಕೀಡಾಗುತ್ತಿರಲಿಲ್ಲ, ವೈಯುಕ್ತಿಕವಾಗಿ ಹಲವು ಜನರ ಬಗ್ಗೆ ಸರ್ವಜ್ಞ ಹೇಳಿದ್ದಾನೆ.,ಗಾಣಿಗರ ಬಗ್ಗೆ, ಹೊಲೆಯರ ಬಗ್ಗೆ, ಕುರುಬರ ಬಗ್ಗೆ, ಬ್ರಾಹ್ಮಣರೂ ಕೂಡ ಅವನ ವಾಕ್ಬಾಣಕ್ಕೆ ತುತ್ತಾಗಿದ್ದಾರೆ....ಓದುವಾಗ, ಸರ್ವಜ್ಞ ಬರೆದಿರುವುದು(ಕೆಲವೊ೦ದು ವಚನಗಳು ಮಾತ್ರ) ಕೇವಲ ಅವನ personal ಅಭಿಪ್ರಾಯವೋ ಅಥವಾ ಅದೇ ಸತ್ಯವೋ ಎ೦ಬುದು ನನ್ನ ಪ್ರಶ್ನೆ.
ಹಾಗೆಯೇ....ಈ ವಚನದ ಬಗ್ಗೆ ಸ್ವಲ್ಪ ವಿಚಾರ ಮಾಡೋಣ..
ಇದ್ದಿಲೂ ಬಡವನೂ ಬಿದ್ದಲ್ಲಿ ಬಲು ಕಷ್ಟ / ಇದ್ದಿಲೊ೦ದು ಕಡೆ ಉಪಕಾರಿ / ಬಡವ
ತಾನಿದ್ದಲ್ಲಿ ಜನಕೆ ಕಷ್ಟವೇ ತಿಳಿ ಸರ್ವಜ್ಞ //
ಬಡವನ ಬಗ್ಗೆ ಸರ್ವಜ್ಞ ಹೀಗೆ ಹೇಳಿರುವುದರ ಅರ್ಥವೇನು ತಿಳಿಸಬಲ್ಲಿರ

chandrashekar84 said...

Thanks.
emce