ಜ್ಞಾನದಿಂ ಮೇಲಿಲ್ಲ| ಶ್ವಾನನಿಂ ಕೀಳಿಲ್ಲ|
ಭಾನು ಮಂಡಲದಿಂ ಬೆಳಗಿಲ್ಲ ಜಗದೊಳಗೆ|
ಜ್ಞಾನವೇ ಮೇಲು ಸರ್ವಜ್ಞ||
ಜ್ಞಾನದಿಂದಲಿ ಇಹವು| ಜ್ಞಾನದಿಂದಲಿ ಪರವು|
ಜ್ಞಾನವಿಲ್ಲದಲೆ ಸಕಲವೂ ತನಗಿದ್ದು|
ಹಾನಿ ಕಾಣಯ್ಯ ಸರ್ವಜ್ಞ||
- ಜ್ಞಾನದಿಂದಲೇ ಈ ಲೋಕದಲ್ಲಿ ಸುಖ ಹಾಗು ಪರಲೋಕದಲ್ಲಿ ಮುಕ್ತಿ ದೊರೆಯುವುದು. ಜ್ಞಾನವೇ ಇಲ್ಲದಿದ್ದರೆ ತನಗೆ ಸಿಕ್ಕಿರುವ ಸಲಕ ವಸ್ತುಗಳೂ ವ್ಯರ್ಥ!
ಎತ್ತ ಹೋದರೂ ಮನವ| ಹತ್ತಿಕೊಂಡೇ ಬಹುದು|
ಮತ್ತೊಬ್ಬ ಸೆಳೆದುಕೊಳಲರಿಯದಾ| ಜ್ಞಾನದಾ
ಬಿತ್ತು ಲೇಸೆಂದ ಸರ್ವಜ್ಞ||
- ನಾವು ಎಲ್ಲೇ ಹೋದರು ಅಲ್ಲಿ ನಮ್ಮ ಮನಸ್ಸು ಬರುವುದು. ಅಂದರೆ ಜ್ಞಾನ. ಅದು ಯಾರಿಂದಲೂ ಕದಿಯಲಸಾಧ್ಯವಾದ ವಸ್ತು.
Thursday, 29 October 2009
Subscribe to:
Post Comments (Atom)
6 comments:
ನಮ್ಮ ಮಾಜಿ ರಾಷ್ಟ್ರಪತಿ ಕಲಾಮ್ ಅವರೂ ಸಹ ಇದನ್ನೇ ಹೇಳಿದ್ದಾರಲ್ಲ! ನಮ್ಮ ವೇದೋಪನಿಷತ್ತುಗಳೂ ಸಹ ಇದನ್ನೇ ಸಾರುತ್ತವೆ:
"ನ ಹಿ ಜ್ಞಾನೇನ ಸದೃಶಂ ಪವಿತ್ರಮಿಹ ವಿದ್ಯತೇ."
ಮತ್ತೊಂದು ಸರ್ವಜ್ಞನ ವಚನ ಕೇಳಿಸಿದ್ದೀರಿ...ಧನ್ಯವಾದಗಳು.
very good blog.Thank you for your effort
ಅಂತರ್ವಾಣಿಯವರೇ,
ಸರ್ವಜ್ಞನ ವಚನಗಳನ್ನು ವಿವರಣೆಗಳ ಮೂಲಕ ನಿಮ್ಮ ಬ್ಲಾಗಲ್ಲಿ ಹಾಕುತ್ತಿದ್ದೀರಿ. ತುಂಬಾ ಶ್ಲಾಘನೀಯವಾದ ವಿಚಾರ . ಆದರೆ ದುರದೃಷ್ಟ ಕರವಾದ ವಿಚಾರವೆಂದರೆ ನಮ್ಮ ಕನ್ನಡಿಗರಲ್ಲಿ ೧೦೦ಕ್ಕೆ ೭೦ಜನ ಸರ್ವಜ್ಞನನ್ನು ಸರ್ವಜ್ಞ ಎಂದು ಕರೆಯದೆ ಸರ್ವಗ್ನ ಎಂದು ಕರೆಯುವುದು ಬಹಳ ವಿಷಾದಕರ ಸಂಗತಿ. ಅಂದರೆ ನನ್ನ ಮಾತಿನ ತಾತ್ಪರ್ಯ 'ಜ್ಞ' ವನ್ನು 'ಗ್ನ' ಎಂದು ಉಚ್ಚರಿಸುವವರೇ ಹೆಚ್ಚು. ಉದಾಹರಣೆಗೆ ವಿಜ್ಞಾನಕ್ಕೆ ವಿಗ್ನಾನ, ಜ್ಞಾಪಕಕ್ಕೆ ಗ್ನಾಪಕ,ಅಷ್ಟೇಕೆ ಪ್ರಜ್ಞಾ ಎನ್ನುವ ಹೆಸರನ್ನು ಸಾರಾಸಗಟಾಗಿ ಪ್ರಗ್ನಾ ಎಂದು ಕನ್ನಡದ ಮನೆಮಾತಾಗಿರುವ ಒಂದು ಪ್ರಖ್ಯಾತ ಟಿವಿ ಧಾರಾವಾಹಿಯಲ್ಲಿ ಕರೆದಿರುವುದನ್ನು ಕೇಳಿ ನನಗೆ ಅಸಹ್ಯವಾಯಿತು. ಹಿಂದಿಯಲ್ಲಿ ಜ್ಞಾನಿಗೆ ಗ್ಯಾನಿ ಎನ್ನುತ್ತಾರೆ. ಕನ್ನಡ ಕನ್ನಡ ಎಂದು ಬೊಬ್ಬೆ ಹೊಡೆಯುತ್ತಿರುವ ನಮ್ಮ ಕನ್ನಡದ ಉದ್ಧಾರಕರಿಗೆ ಕೃತಜ್ನತೆಗೂ ಕೃತಘ್ನತೆಗೂ ವ್ಯತ್ಯಾಸವೇ ತಿಳಿದಿಲ್ಲ!! ನಮ್ಮ ಕನ್ನಡ ಚಿತ್ರ ರಂಗದಲ್ಲಿ, ದೂರದರ್ಶನದ ಧಾರಾವಾಹಿಗಳಲ್ಲಿ ಈ ಅಪಭ್ರಂಶವನ್ನು ಕೇಳಿ ಕೇಳಿ ನನಗಂತೂ ತಲೆ ಚಿಟ್ಟು ಹಿಡಿದುಹೋಗಿದೆ. ಯಾಕೆ ಜ್ಞಾನ ವೆಂಬ ಶಬ್ದ ಉಚ್ಚರಿಸಲು ಅಷ್ಟೊಂದು ಕಠಿಣವೆ? ಅಲ್ಲದೆ ಇದನ್ನು ತಿಳಿದವರು ಆಯಾ ಸಂದರ್ಭಗಳಲ್ಲಿ ಯಾಕೆ ತಿದ್ದುವುದಿಲ್ಲ? ಒಂದು ಕನ್ನಡ ಚಲನಚಿತ್ರದಲ್ಲಿಯಂತೂ(ನನಗೆ ಈಗ ಹೆಸರು ನೆನಪಿಲ್ಲ, ಒಮ್ಮೆ ಟಿವಿಯಲ್ಲಿ ನೋಡಿದ್ದೆ) ನಮ್ಮ ಪ್ರಖ್ಯಾತ ನಾಯಕ ನಟರಾಗಿದ್ದ ದಿ.ವಿಷ್ಣುರವರು ಒಂದು ಡೈಲಾಗಿನಲ್ಲಿ " 'ಅ' ದಿಂದ 'ಳ' ವರೆಗಿನ ಕನ್ನಡ ಅಕ್ಷರಗಳಲ್ಲಿ" ಎನ್ನುವ ಒಂದು ಸಾಲನ್ನು ಹೊಡೆದುರುಳಿಸಿದ್ದಾರೆ! ಅಂದರೆ 'ಕ್ಷ' ಮತ್ತು 'ಜ್ಞ' ಎನ್ನುವ ಅಕ್ಷರಗಳು ಕನ್ನಡ ವರ್ಣ ಮಾಲೆಯಿಂದಲೇ ನಾಪತ್ತೆ!! ನಮ್ಮ ರಾಜ್ಯದ ಕೆಲವೇ ಜಿಲ್ಲೆಗಳನ್ನು ಹೊರತುಪಡಿಸಿದರೆ ಉಳಿದೆಲ್ಲ ಕಡೆಯಲ್ಲಿಯೂ ಮದ್ದೇ ಇಲ್ಲದ ಈ ಪಿಡುಗು ಅನಾದಿಕಾಲದಿಂದಲೂ ಉಳಿದು ಬೆಳೆದು ಬಂದಿದೆ ಎಂಬುದು ಬಹಳ ವಿಷಾದಕರ. ಗ್ನಾನ ಎನ್ನುವ ಶಬ್ದ ಜ್ಞಾನಕ್ಕೆ ಪರ್ಯಾಯ ಶಬ್ದವೇ ಎಂಬುದನ್ನು ತಿಳಿದವರು (ಜ್ಞಾನಿಗಳು!!) ತಿಳಿಸಿಕೊಟ್ಟರೆ ಬಹಳ ಉಪಕಾರವಾಗುತ್ತದೆ.

very good
Post a Comment