Wednesday, 22 April 2009

ಸರ್ವಜ್ಞನೆಂಬುವನು....

ಪುಷ್ಪದತ್ತನನ್ನು ಮನೆಯಿಂದ ಹೊರಕ್ಕೆ ಹಾಕಿದ ಮೇಲೆ, ಅವನು ಅನೇಕ ಗುರುಗಳಿಂದ ವಿದ್ಯಾಭ್ಯಾಸ ಮಾಡಿ ಅಪಾರವಾದ ಜ್ಞಾನವನ್ನು ಸಂಪಾದಿಸುತ್ತಾನೆ. ಆ ಗುರುಗಳಿಂದ ತಿಳಿದದ್ದನ್ನು ಸಮಾನ್ಯ ಜನರಿಗೆ ತಲುಪಿಸುವ ಕಾರ್ಯವನ್ನು ಮಾಡುತ್ತಾನೆ.
ನಂತರ ಸರ್ವಜ್ಞನೆಂಬ ಅಂಕಿತದಿಂದ ಅನೇಕ ವಚನಗಳನ್ನು ತ್ರಿಪದಿ ರೂಪದಲ್ಲಿ ಬರೆಯುತ್ತಾನೆ.

ಈ ವಚನಗಳನ್ನು ಗಮನಿಸಿ:

ಸರ್ವಜ್ಞನೆಂಬುವನು ಗರ್ವದಿಂದಾದವನೆ?|
ಸರ್ವರೊಳಗೊಂದು ನುಡುಗಲಿತು ವಿದ್ಯೆಯ|
ಪರ್ವತವೇ ಆದ ಸರ್ವಜ್ಞ||

- ನಾನು ವಿದ್ಯೆಯ ಗರ್ವದಿಂದ ಸರ್ವಜ್ಞನೆಂದು ಹೇಳಿಕೊಳ್ಳುತ್ತಿಲ್ಲ. ನಾನು ಎಲ್ಲಾ ವಿದ್ವಾಂಸರ ಹತ್ತಿರ ಒಂದೊಂದು ಮಾತನ್ನು ಕಲಿತು ( ಬಹಳಷ್ಟು ಮಂದಿಯಿಂದ ವಿದ್ಯಾಭ್ಯಾಸ ಮಾಡಿಕೊಂಡು) ವಿದ್ಯೆಯ ಪರ್ವತವೇ ಆದೆನು. ಅಂದರೆ ಈತನಿಗಿಂತ ತಿಳಿದವರು ಎಷ್ಟೋ ಜನರಿದ್ದಾರೆ.

ಹೇಳಲರಿಯನು ನಾನು ಹೇಳೆನಲು ಹೇಳಿದೆನು|
ಬಾಳಲೋಚನನ ಶರಣರಾಳಾಗಿ|
ಹೇಳಿದೆನು ನೋಡು ಸರ್ವಜ್ಞ||

- ನನಗೆ ವಚನಗಳನ್ನು ಹೇಳಲು ತಿಳಿದಿಲ್ಲ. ಆದರೆ ಜನರೆಲ್ಲಾ ಬಲವಂತವಾಗಿ ಹೇಳು ಎಂದಿದ್ದರಿಂದ ಶಿವನ ದಾಸಾನುದಾಸನಾಗಿ ನನಗೆ ತಿಳಿದಿದ್ದನ್ನು ಹೇಳಿದೆನು.

10 comments:

Girish said...

ಪ್ರೀತಿಯ ಶಂಕರ,

ಧನ್ಯವಾದಗಳು ಮತ್ತೊಮ್ಮೆ.

ನನ್ಗೆ "ಸರ್ವರೊಳಗೊಂದು ನುಡುಗಲಿತು"ದ ಅನುವಾದದ ಬಗ್ಗೆ ಸ್ವಲ್ಪ ಅನುಮಾನವಿದೆ. ಶ್ರೀಮದ್ ಭಾಗವತಮ್ ನಲ್ಲಿ ಹೀಗೆ ಒಂದು ಸನ್ನಿವೇಶ ಬರುತ್ತೆ, ಒಬ್ಬ ಸರ್ವಜ್ಞನ ಹಾಗೆಯೇ ಒಬ್ಬಾ ಮಹಾ ಪಂಡಿತನನ್ನು "ನಿಮಗೆ ಈ ಎಲ್ಲಾ ವಿಧ್ಯೆಗಳು ಎಲ್ಲಿಂದ ಬಂತು" ಅಂತ ಕೇಳಿದಾಗ ಅವನೂ ಹೀಗೇ ಹೇಳುತ್ತಾನೆ.

"ಎಲ್ಲರಿಂದಲೂ ಕಲಿತಿದ್ದೇನೆ, ನನಗೆ ೨೪ ಗುರುಗಳು": ಭೂಮಿ, ಗಾಳಿ, ಆಕಾಶ, ನೀರು, ಬೆಂಕಿ, ಚಂದ್ರ, ಸೂರ್ಯ, ಪಾರಿವಾಳ, ಹೆಬ್ಬಾವು, ಸಮುದ್ರ, ಕೀಟ, ಜೇನುನೊಣ, ಜೇನು-ಕಳ್ಳ, ಆನೆ, ಜಿಂಕೆ, ಮೀನು, ವೈಷ್ಯೆ, ಹದ್ದು, ಮಗು, ಹುಡುಗಿ, ಬೇಡ, ಹಾವು, ಜೇಡ, ಮತ್ತು ಕಣಜ. ಇವಲ್ಲರಿಂದಲೂ ಬೇರೆ ಬೇರೆ ವಿಧ್ಯೆ, self-realization, ಕಲಿತಿದ್ದೇನೆ ಅಂತ.
complete referenceಗೆ ಈ ಅತ್ಯುತ್ತಮ ಭಾಗವನ್ನ ಓದಿ ಬೇಕಾದರೆ http://srimadbhagavatam.com/11/7/en. ಭಾಗವತದ ಜ್ಞಾನ ಅದ್ಭುತ.

ಆದ್ರಿಂದ ಸರ್ವಜ್ಞನೂ ಹೀಗೆ ಹೇಳಿರಬೇಕು ಅಂತ ಅನುಮಾನ.ಯಾಕಂದ್ರೆ, ನಾವು ಮುಂಚೆನೆ ನೋಡಿರೋ ಹಾಗೆ ಇವನು "rebel" ಆದ್ರಿಂದ ವಿಧ್ವಾಂಸರಿಂದ ವಿಧ್ಯಾಭ್ಯಾಸ ಮಾಡಿದ್ದಾನೆ ಅಂತ ಯಾಕೊ ನಂಬಲು ಆಗುತ್ತಿಲ್ಲ. ಇವನು ಎಲ್ಲರಿಂದ ಅರಿತವನು, ಆದ್ರಿಂದ ಇವು ಈತನ ಅನುಭವದ ಮಾತುಗಳು, ಆ ಭಗವಂತನ ಕೃಪೆಯಿಂದ ಹೇಳುತ್ತಿದ್ದಾನೇನು ಅನ್ನೊ ಅನುಮಾನ.

ಎರಡನೆಯ ವಚನದ ಅನುವಾದದಲ್ಲೂ ಎರಡು ಪುಟ್ಟ ತಪ್ಪಿರಬೇಕು ಅನ್ಸುತ್ತೆ. ಮೊದಲು, "...ಅಪೇಕ್ಷೆ ಮಾಡಿರಲಿಲ್ಲ" ಅನ್ನೋದೂ ಸರಿ ಇಲ್ಲ ಅನ್ಸುತ್ತೆ, ಅವ್ನು ಹೇಳೋದು "ಹೇಳಲು ಅರಿಯೆನು" ಅಂದ್ರೆ "ನನಗೆ ತಿಳಿಯದು, ಹೇಳಲು ಯೋಗ್ಯನಲ್ಲ, ಯಾವುದೇ ಅರ್ಹತೆ ಇಲ್ಲ" ಅನ್ನೋ ಹಾಗಿದೆ ಅಲ್ವಾ? ಅವನ ವಿನಯತೆ ಮತ್ತು ನಮ್ರತೆಯನ್ನೂ ಇಲ್ಲಿ ಕಾಣಬಹುದು, ಅಲ್ವಾ?

ಮತ್ತೊಂದು, "ಶಿವನ ಆಳಾಗಿ ನನಗೆ ತಿಳಿದಿದ್ದನ್ನು ಹೇಳಿದೆನು" ಅಂತ ಇದೆ, ಆದ್ರೆ ಅವನು ಹೇಳೋದು "ಬಾಳಲೋಚನನ **ಶರಣರ ಆಳಾಗಿ**", ಆದ್ರಿಂದ ಈತನು ಶಿವನ-ಶರಣರ-ಆಳಾಗಿ ಹೇಳುತ್ತಿದ್ದಾನೆ. ಶಿವನ ಆಳಾಗಿ ಅಲ್ಲ. ಅಂದ್ರೆ, ದಾಸಾನುದಾಸನಾಗಿ.

ನಿಮ್ಮಿಂದ ಹೊಸ ಪದವೂ ತಿಳಿತು ಇವತ್ತು "ಬಾಳಲೋಚನ" :) ಧನ್ಯವಾದಗಳು.

ದಯವಿಟ್ಟು ಹೀಗೆ ಮುಂದುವರೆಸಿ, ತುಂಬಾ ಚೆನ್ನಾಗಿದೆ ಈ ವಚನಗಳು.

ಪ್ರೀತಿಯ,
ಗಿರೀಶ

ಅಂತರ್ವಾಣಿ said...

ಪ್ರೀತಿಯ ಭಾವ,
ನಿಮ್ಮ ವಿನಯವಾದ ಸ್ಪಂದನಕ್ಕೆ ಧನ್ಯವಾದಗಳು.

ನಿಮ್ಮ ಮಾತು ಒಪ್ಪುತ್ತೇನೆ. ಸರ್ವಜ್ಞ ಭಾಗವತ ರಚನೆಯಾದ ನಂತರ ಹುಟ್ಟಿದ್ದಲ್ಲಿ .. ಭಾಗವತದ ಅಂಶ ಬರೆದಿದ್ದಾನೆ. ಈಗ ನನಗೂ realization ಆಯ್ತು. "ಸರ್ವ" ಅಂದರೆ ಕೇವಲ ಗುರುಗಳಲ್ಲ, ಪ್ರತಿಯೊಂದೂ ಜೀವ ಕೂಡ. ಆತನ ವಚನಗಳಲ್ಲಿ ಪ್ರತಿಯೊಂದು ವಿಷಯದ ಬಗ್ಗೆ ಹೇಳಿದ್ದಾನೆ.

ನನ್ನಿಂದ ತಪ್ಪಾಗಿದೆ. ನಿಮ್ಮ ಸಲಹೆಯಂತೆ ತಿದ್ದಿದ್ದೇನೆ. ಇದಕ್ಕೆ ನಿಮಗೆ ವಂದಿಸಲೇ ಬೇಕು.

ಹೆಹೆಹೆ..ಹೊಸ ಪದ ತಿಳಿದಿದ್ದು ನನ್ನಿಂದ ಅಲ್ಲ. ಆ ಸರ್ವಜ್ಞನಿಂದ.

ಧನ್ಯವಾದಗಳು..

ಸವಿತೃ said...

ಅಂತರ್ವಾಣಿಯವರೆ

[quote]ನಿಮ್ಮ ಮಾತು ಒಪ್ಪುತ್ತೇನೆ. ಸರ್ವಜ್ಞ ಭಾಗವತ ರಚನೆಯಾದ ನಂತರ ಹುಟ್ಟಿದ್ದಲ್ಲಿ .. ಭಾಗವತದ ಅಂಶ ಬರೆದಿದ್ದಾನೆ. [/quote]

ಇಂತಹ ತೀರ್ಪು ತಪ್ಪಾಗುತ್ತದೆ. ಅವನ ಕಾಲ ಭಾಗವತಕ್ಕೆ ಮುಂಚೆಯಾಗಲಿ ಅತ್ವ ಈಚಿನದಾಗಲಿ ನಿಮ್ಮ ಮಾತನ್ನು ಒಪ್ಪಲಾಗುವುದಿಲ್ಲ. ನಾವು ಸಾಮ್ಯತೆಯನ್ನು ಗುರ್ತಿಸಬಹುದಷ್ಟೆ. ಹೆಚ್ಚು ತಿಳಿದವನ ಅತಿ ವಿನಯವೊಂದೆ ಸಾಕು ಇಂತಹ ವಚನಗಳು ಹೊರಬರಲು.. ಭಾಗವತದ ಜ್ನಾನ ಆವಶ್ಯಕವಲ್ಲ.


ಮತ್ತು ಸರ್ವಜ್ನ ಬಸವಾದಿ ಶರಣರ ನಂತರದ ಕಾಲದವನು ಅನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ. ಆತನ ವಚನಗಳ reference ಗಳೆ ಇದನ್ನು ತೋರಿಸುತ್ತವೆ. ಮತ್ತು ಭಾಗವತ 12 ನೆ ಶತಮಾನಕ್ಕಿಂತ ಹಳೆಯದಾದರೂ
ತುಂಬಾ ಇತ್ತೀಚೆಗೆ update ಆಗಿರುವ ಸಾಧ್ಯತೆಗಳನ್ನು ತಳ್ಳಿಹಾಕಲು ಸಾಧ್ಯವಿಲ್ಲ. ಇತ್ತೀಚೆಗೆ ಯಾವಾಗ “update” ಆಗಿದೆ ಅಂತ ನನಗೆ ತಿಳಿದಿಲ್ಲ.

ಅಂತರ್ವಾಣಿ said...

ಸವಿತೃ ಅವರೆ,
ಸರ್ವಜ್ಞನ ಕಾಲದ ಬಗ್ಗೆ ಹಿಂದಿನ ಪೋಸ್ಟಿನಲ್ಲಿ ಬರೆದಿದ್ದೇನೆ. ಆತನ ಕಾಲ ನಿಖರವಾಗಿ ಹೇಳಲು ಸಾಧ್ಯವಿಲ್ಲ.

ಬಸವಣ್ಣನ ನಂತರದವನು ಅನ್ನುವುದಕ್ಕೆ ನಿಮ್ಮ ಹತ್ತಿರ ದಾಖಲೆ ಏನಿದೆ? ಸರ್ವಜ್ಞನ ವಚನಗಳ reference ಶರಣರು ಮಾಡಿರ ಬಹುದಲ್ಲವೇ?

Girish said...

ಹೌದು! ಸವಿತೃ ಹೇಳಿದ ಹಾಗೆ ಸರ್ವಜ್ಞ ಭಾಗವತದಿಂದ ಕಲಿತಿರಬೇಕು ಅಂತ ಹೇಳಲಾಗುವುದಿಲ್ಲ. ನಾನು ಹೀಗೆ ಭಾಗವತದಲ್ಲೊ ಇದೆ, ಆದ್ರಿಂದ ಈ ಅರ್ಥವೂ ಇರಬಹುದೇನೋ ಅನ್ನೋ ಅನುಮಾನ ವ್ಯಕ್ತ ಪಡೆಸಿದೆಯಷ್ಟೆ.

ಸವಿತೃ, ನೀವ್ ಹೇಳ್ತೀರಾ "ಮತ್ತು ಸರ್ವಜ್ನ ಬಸವಾದಿ ಶರಣರ ನಂತರದ ಕಾಲದವನು ಅನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ". ಅಂತರ್ವಾಣಿ ಹೇಳಿದ ಹಾಗೆ ನೀವು ಇದನ್ನ ಕಚಿತವಾಗಿ ಹೇಗೆ ಹೇಳಬಹುದೋ ಗೊತ್ತಿಲ್ಲ. ಕಂಡಿತವಾಗಿ ಅನುಮಾನಿಸಬಹುದು.

"ಭಾಗವತ 12 ನೆ ಶತಮಾನಕ್ಕಿಂತ ಹಳೆಯದಾದರೂ
ತುಂಬಾ ಇತ್ತೀಚೆಗೆ update ಆಗಿರುವ ಸಾಧ್ಯತೆಗಳನ್ನು ತಳ್ಳಿಹಾಕಲು ಸಾಧ್ಯವಿಲ್ಲ. ಇತ್ತೀಚೆಗೆ ಯಾವಾಗ “update” ಆಗಿದೆ ಅಂತ ನನಗೆ ತಿಳಿದಿಲ್ಲ"
.

"ತುಂಬಾ ಇತ್ತೀಚೆಗೆ" ಅಂದ್ರೆ ಎಷ್ಟು ಇತೀಚೆಗೆ ಇರಬಹುದು ನಿಮ್ಮ ಪ್ರಕಾರ? ಶ್ರೀ ಶಂಕರಾಚಾರ್ಯರ ಕಾಲಕ್ಕೂ ತುಂಬಾ ಮುಂಚಿನ commentary ಈಗ್ಲೂ ಪ್ರತೀತಿಯಲ್ಲಿ ಇರೋದು, ಶ್ರೀ ಶಂಕರರ contemporariesದೂ commentaries ಇರೋದನ್ನ ನೋಡಿ ಅನುಮಾನಿಸಬಹುದು. ಇದರ ಬೇರೆ ಬೇರೆ ಅನುವಾದಗಳು, ತಾತ್ಪರ್ಯಗಳು, ಠೀಕೆಗಳೂ ಇರಬಹುದು, ಆದರೆ ಮೂಲ ಗ್ರಂಥವೇ ಬದಲಾಗಿಲ್ಲ ಅನ್ನೋದು ನನ್ನ ತಿಳುವಳಿಕೆ.

ಈ forumನಲ್ಲಿ ಈ ವಾದ-ವಿವಾದ ಸರಿಯಲ್ಲ ಅನ್ಸುತ್ತೆ. ಸರ್ವಜ್ಞನ ವಚನಗಳಿಗೆ ಸೀಮಿತಗೊಳಿಸೋದೇ ಸರಿ.

ಧನ್ಯವಾದಗಳು.
ಪ್ರೀತಿಯ,
ಗಿರೀಶ್

sunaath said...

ಜಯಶಂಕರ,
ಸರ್ವಜ್ಞನ ವಚನಗಳ ಮಾಲೆಯನ್ನು ಪ್ರಾರಂಭಿಸಿದ್ದಕ್ಕೆ ನಿಮಗೆ ಅಭಿನಂದನೆ ನೀಡುತ್ತೇನೆ. ದಯವಿಟ್ಟು ಆತನ ವಿಶೇಷ ವಚನಗಳ ಬಗೆಗೆ ಬರೆಯಿರಿ.

ಅಂತರ್ವಾಣಿ said...

ಸುನಾಥಂಕಲ್,
ಧನ್ಯವಾದಗಳು. ಮುಂದಿನ ಪೋಸ್ಟುಗಳಲ್ಲಿ ಖಂಡಿತ ಬರೆಯುತ್ತೇನೆ.

shivu.k said...

ಜಯಶಂಕರ,

ಸರ್ವಜ್ಞನ ವಚನಮಾಲೆ ತುಂಬಾ ಚೆನ್ನಾಗಿ ಬರುತ್ತಿದೆ...ನಿಮ್ಮ ಉತ್ತಮ ಕಾರ್ಯ ಮುಂದುವರಿಯಲಿ....
ಧನ್ಯವಾದಗಳು..

ಸವಿತೃ said...

ಗಿರೀಶ್ ಚಂದ್ರ ಅವರೇ

ನೀವು ಹೇಳಿದಂತೆ ಇಲ್ಲಿನ ಮಾತುಕಥೆಯನ್ನು ಸರ್ವಜ್ನನ ವಚನಗಳಿಗೆ ಮೀಸಲಿಡುವುದು ಒಳ್ಲೆಯದು.

ಅಂತರಾಣಿಯವರೇ

comment moderation ತೆಗದರೆ ಚರ್ಚೆ ಸುಲಭ ವಾಗುತ್ತೆ ಅನ್ನುವುದು ನನ್ನ ಅನಿಸಿಕೆ.

Hindustani said...

Kasina jeevanakkintha O C jeevanave lesenda sarvajna.