ಕುಲ ಎನ್ನುವ ಪದ ಕೇಳಿದರೆ, ಕನಕದಾಸರು ರಚಿಸಿರುವ,
"ಕುಲ ಕುಲ ಕುಲವೆಂದು ಹೊಡೆದಾಡದಿರಿ
ನಿಮ್ಮ ಕುಲದ ನೆಲೆಯನ್ನೇನಾದರು ಬಲ್ಲಿರಾ?" ನೆನಪಾಗುತ್ತೆ. ಸರ್ವಜ್ಞನೂ ಕೂಡ ಈ ಕುಲದ ಬಗ್ಗೆ ತನ್ನ ಹಲವು ವಚನಗಳಲ್ಲಿ ಹೇಳಿದ್ದಾನೆ.
ಹೊಲಸು ಮಾಂಸದ ಹುತ್ತ| ಎಲುವಿನಾ ಹಂದರವು|
ಹೊಲೆಬಲಿದ ತನುವಿನೊಳಗಿರ್ದುಮದರೊಳಗೆ|
ಕುಲವನರಸುವರೇ ಸರ್ವಜ್ಞ||
ಎಲುವಿನೀ ಕಾಯಕ್ಕೆ| ಸಲೆ ಚರ್ಮದ ಹೊದಿಕೆ|
ಮಲ ಮೂತ್ರ ಕ್ರಿಮಿಗಳೊಳಗಿರ್ದ ದೇಹಕ್ಕೆ|
ಕುಲವಾವುದಯ್ಯ ಸರ್ವಜ್ಞ||
ಮಾಸಿನೊಳು ಮುಸುಕಿರ್ದ| ಮೂಸಬದುದಾಸನದಿ|
ಹೇಸಿಕೆಯ ಮಲವು ಸೂಸುವುದ ಕಂಡ ಕುಲ|
ದಾಶೆಯನು ಬಿಡರು ಸರ್ವಜ್ಞ||
Sunday, 19 July 2009
Subscribe to:
Post Comments (Atom)
5 comments:
ಸರ್ವಜ್ಞನ ವಚನಗಳನ್ನು ಮತ್ತೆ ಪ್ರಾರಂಭಿಸಿದ್ದಕ್ಕೆ ಅಭಿನಂದನೆಗಳು.
ತಮ್ಮ ಕುಲವೇ ಶ್ರೇಷ್ಠವೆಂದುಕೊಳ್ಳುವ ದಡ್ಡರಿಗೆ, ಎಲ್ಲರ ದೇಹಗಳು ಅಂತಹದೇ ಹೊಲೆಯಿಂದ ತುಂಬಿರುವಾಗ ಶ್ರೇಷ್ಠತೆಯ
ಭ್ರಮೆ ತಪ್ಪು ಎನ್ನುವ ಈ ವಚನಗಳು ಯೋಗ್ಯ ಉದಾಹರಣೆ ನೀಡುತ್ತವೆ.
ಜಯಶಂಕರ್,
ಆಗಾಗ ಇಂಥ ಸರ್ವಜ್ಞನ ವಚನಗಳನ್ನು ಕೊಡುತ್ತಿರುವುದಕ್ಕೆ ಧನ್ಯವಾದಗಳು.
tumba chinnagidi nimma blog..
thanks jayashankar for this...
ಎಲ್ಲರಿಗೂ,
ವಂದನೆಗಳು
ಜಾತಿಹೀನನ ಮನೆಯ ಜ್ಯೋತಿ ತಾ ಹೀನವೆ?
ಜಾತಿ ವಿಜಾತಿ ಎನಬೇಡ
ದೇವನೊಲಿದಾತನೆ ಜಾತ ಸರ್ವಜ್ಞ.
namana
Post a Comment